ಉಸಿರು….!!!!

ಅವನ ಬಿಂಬವ ತುಂಬಿಡಲು
ಇಚ್ಚಿಸುವೆನು
ನನ್ನ ಈ ಕಣ್ಣಾಲೆಗಳಲ್ಲಿ..
ಆದರೆಲ್ಲಿ ಜಾರಿ ಹೋಗುವನೋ
ಎಂಬ ಬಯ ನನ್ನ ಕಣ್ಣೀರಿನಲಿ..!!!
ಸೆರೆ ಹಿಡಿಯಲು ಇಷ್ಟ
ಅವನನ್ನ ನನ್ನ
ಕನಸುಗಳೊಳಗೆ..
ಆದರೆ ಎಲ್ಲಿ ಮಾಯವಾಗುವನೋ
ಎಂಬ ಬಯ ನನಗಿಲ್ಲಿ
ನಾ ಕಣ್ಣು ಬಿಟ್ಟ ಯಾವುದೊ
ಅಗೋಚರ ಕ್ಷಣದೊಳಗೆ..
ದೂರಾಗುವನೆಂಬ ಬಯದೊಳಗೆ
ಬಚ್ಚಿಟ್ಟಿರುವೆ ನನ್ನ ಉಸಿರೊಳಗೆ
ಈಗ ದೂರಾಗುವ ಬಯವಿಲ್ಲ
ಉಸಿರ ಬಿಟ್ಟು ಬದುಕೆಲ್ಲಿ?
ಅವನನ್ನ ಉಸಿರು ನನ್ನ ಬದುಕಿನಲ್ಲಿ…!!!!
ನನ್ನ ನಲ್ಲ…!!!!

ನನ್ನ ನಲ್ಲ ಹೇಗಿರಬೇಕು ಗೊತ್ತೆ…!!!
ನನ್ನ ಹೃದಯದಲ್ಲಿರುವ ಪ್ರೀತಿಯ
ಹಣತೆ ನಾನಾದರೆ..
ಅದನ್ನು ಬೆಳಗಿಸುವ ಜ್ಯೋತಿ
ಅವನಾಗಬೇಕು…
ಸುಂದರ ಕನಸುಗಳನ್ನ
ಕಾಣುವ ಕಣ್ಣುಗಳು
ನನ್ನದಾದರೆ…
ಆ ಕಣ್ಣೊಳಗೆ ಕೊರೈಸುವ
ಕಾಂತಿ ಅವನಗಬೇಕು…!
ಆಸೆಗಳು ಕೂಡಿರುವ
ಮುದುಡಿದ ಮೊಗ್ಗು
ನಾನಾದರೆ…
ಮೊಗ್ಗು ಅರಳಿಸುವ
ಮುದ್ದು ಗೆಳೆಯ
ಅವನಾಗಬೇಕು….
ನೋವೊಳಗೆ ಅಳುವ
ಮುಗ್ಧ ಮಗು
ನಾನಾದರೆ…
ಅಳುವ ಮರೆಸಿ
ಲಾಲಿ ಹಾಡುವ
ತಾಯಿ ಹೃದಯ ಅವನಗಬೇಕು…!!!!
ನಯನಗಳು…!!!

ಒಮ್ಮೆ ಚಂದಿರನಿಲ್ಲದ ಬಾನಿನಲ್ಲಿ
ನಾ ತಾರೆಗಳನ್ನು ಹುಡುಕುತ್ತಿದ್ದೆ !
ತಾರೆಗಳಂತೆ ಮಿನುಗುವ ನಿನ್ನ ಆ ಎರೆಡು
ಕಣ್ಣುಗಳ ನೋಡಿ ಎನೋ ಒಂದು ವಿಸ್ಮಯತೆ ನನ್ನೊಳಗೆ…!!
ಸದಾ ಸುಂದರ ದೃಶ್ಯಗಳನ್ನು
ಸೂರೆಗೊಳ್ಳುವ ನಿನ್ನ ನಯನಗಳು,
ಇಂದು ನನ್ನ ಸೂರೆ ಮಾಡುತ್ತಿರುವಂತಿದೆ
ಅವು ಬರಿ ನಯನಗಳಲ್ಲ ಗೆಳೆಯಾ….
ವಿಶಾಲವಾದ ಭಾವನೆಗಳ ಕಡಲುಗಳು… !!
ಕಣ್ಣೊಳಗಿರುವ ಬಾಷೆಯನ್ನಾನಾನರಿಯದೆ ಹೋದರು
ಅದರೊಳಗಿರುವ ಮೌನವನ್ನ ನಾ ಬಲ್ಲೆನು
ನಗುವ ನಯನಗಳು ನಕ್ಕರೆ ತಾನೆ ಚೆಂದ
ನೀ ಸದಾ ನಗುನಗುತಲಿರು ನನ್ನ ಚಿನ್ನ
ಓ ಚಿಗುರೆಗಣ್ಣಿನ ಗೆಳೆಯನೇ ನೀ ನಗು ನಗುತ್ತಿರು ನನ್ನ ಚಿನ್ನ…!!