ಹುಚ್ಚು ಕುದುರೆ…!!!

March 7, 2007 at 12:07 pm (ಕವನಗಳು)

null

ಪ್ರೀತಿಯೆಂಬ ಹುಚ್ಚು ಕುದುರೆಯ ಬೆನ್ನ ನೇರುವರು ಎಲ್ಲ
ಹುಚ್ಚು ಕುದುರೆಯ ಸಹವಾಸ ಕೇಡು ಎಂದು ಅರಿತರು ಎಲ್ಲ.
ಕಡಿವಾಣ ಇಲ್ಲದ ಮನಸ್ಸು ಏರಿದರೆ ಹುಚ್ಚು ಕುದುರೆಯನ್ನು,
ಸರಿ ತಪ್ಪುಗಳ ಆಲೋಚನೆ ಇರಲಿ,ಲೋಕವಾದರೂ ಕಾಣುವೂದೇನು..!!

ನೋಡಲು ಸುಂದರವಾಡ ಪ್ರೇಮ ಮಂದಿರದಂತೆ,
ಪ್ರವೇಶಿಸಿದರೊಮ್ಮೆ ಹೊರಬರಲಾಗದ ಏಳು ಸುತ್ತಿನ ಕೋಟೆ
ಎತ್ತ ನೋಡಿಡರತ್ತ ಚಿಂತೆಗಳ ಭೂತ
ಹೆತ್ತವರೋ, ಇಲ್ಲ ಸಂಗಾತಿಯೋ ಎಂಬ ಆತಂಕದ ಶೋಕ..!!

ಅತ್ತ ದಡವ ಸೇರಿದ ಹಾಗೂ ಇಲ್ಲ,
ಇತ್ತ ಈಜುವ ಹಾಗೂ ಇಲ್ಲ,
ಅದಕ್ಕೆ ಅಲ್ಲವೇ ಪ್ರೇಮಿಗಳು ಹೇಳುವುಧು,
ನಾ ಪ್ರೀತಿಯಲ್ಲಿ ಮುಳುಗಿಹೆನೆಂದು

ಕಡಿವಾಣವಿಲ್ಲದ ಮನಸ್ಸೇ ಏರದಿರು ನೀ ಹುಚ್ಚು ಕುದುರೆಯನ್ನು,
ಬೆನ್ನು ಹತ್ತಿ ಹೋಗದಿರು ಮಾಯಾ ಜಿಂಕೆಯನ್ನು
ಅಗಸದ ಕಾಮನಬಿಲ್ಲು ಆಗಸಕ್ಕೆ ಅಷ್ಟೇ ಚೆನ್ನ,
ಮಾಯದಾ ಪ್ರೀತಿ ಕೇಳುವುದಕ್ಕೆ ಮಾತ್ರ ಚೆನ್ನ…!!

ಹುಚ್ಚು ಕುದುರೆ ಪಳಗಿಸುವ ಸಾಮರ್ಥ್ಯ ಇದ್ದರೆ ಒಳಿತು,
ಇಲ್ಲಾಧಿಧರೆ ಹಾಳು ಬಾವಿಗೆ ಬೀಳುವುಧು ಕಚಿತವಾದ ಮಾತು.
ಹುಚ್ಚು ಕುದುರೆಯ ಸಹವಾಸ ನಮಗೇಕೆ,
ನಮ್ಮಷ್ಟಕ್ಕೆ ನಾವು ಇದ್ದರೆ ಸಾಕು ಎಂಬುದು ನನ್ನ ಅನಿಸಿಕೆ..

Permalink 2 Comments