ಗೆಳತಿ…………….

June 28, 2007 at 8:13 am (ಕವನಗಳು)

null

ಅಂದು ನೀ ಕೊಟ್ಟ ಭರವಸೆಗಳೇನದವು ಗೆಳತಿ
ಮರೆತೆಯಾ ನೀ ಎಲ್ಲವನ್ನು
ನಮ್ಮ ಸ್ನೇಹದಲ್ಲಿ ಮಾತ್ಸರ್ಯವಿಲ್ಲೆಯೆಂದಿದ್ದೆ
ಇಂದೇನಾಗಿಹೋಯಿತು ಗೆಳತಿ..

ನಿನಗೆ ನಾ ಮಗುವು ನನಗೆ ನೀ ಮಗುವು
ಇದು ನಿನಗೆ ತಿಳಿದಿಲ್ಲವೇ..
ಮಗುವಿನಾ ಮುನಿಸಿದು ಎಂದು ನಾ ತಿಳಿದಿದ್ದೆ
ಆದರೇ ತಾಯಿಯೆ ಇಲ್ಲವೆನಗೆ ಎನ್ನುವುದು ನಿನಗೆ ತರವೇ?

ನಮ್ಮದು ತಿಳಿಹಾಲಿನದ್ದು ಬಂಧನವೆಂದ
ನಿನ್ನ ಅಷ್ಟೂ ಮಾತುಗಳು ಇಂದೇನಾದವು?
ಹಾಲಿನಂತ ಈ ಸ್ನೇಹ ಒಡೆದಿದ್ದಾದರು ಎಲ್ಲಿ ನೆನಪು ಮಾಡು….

ನನ್ನ ಸ್ನೇಹವಿದು ನಿನಗೆ ಪಂಜರದ ಹಕ್ಕಿಯೆನಿಸಿದರೆ
ಹಾರಿ ಬಿಡಲು ಆ ಹಕ್ಕಿಯನ್ನು ನಾನು ಸಿದ್ದ..
ಆದರೇ ಒಂದು ಮಾತು ಹಾರುವ ಮುನ್ನ
ನೀ ತಿಳಿಸದೇ ಹೋಗದಿರು
ನನ್ನ ಸ್ನೇಹ ನಿನಗೆ ಪಂಜರವಾದ ಕಾರಣವನ್ನ…….

Permalink 4 Comments